Friday, April 11, 2014

ನಾಗರಹೊಳೆ ಛಾಯಾಚಿತ್ರ ಕಾರ್ಯಾಗಾರ 2014


ಕಾಡು ತನ್ನದೆಯಾದ ನಿಗುಡತೆಯನ್ನು, ರೋಚಕತೆಯನ್ನು ಮಡಿಲಲ್ಲಿ ತುಂಬಿಕೊಂಡಿದೆ.....
 ... ಅದನರಿಯುವ ಮನಸ್ಸು, ಕಣ್ಣು ಮಾತ್ರ ನಮಗೆ ಬೇಕಿದೆ.
ನನ್ನ ಪ್ರಕೃತಿ ಹೊರಗಿನ ಪ್ರಕೃತಿಯ ಜೊತೆಗೆ ಬೆರತಾಗ ನಮ್ಮ ಕಣ್ಣುಮನಕ್ಕೆಅದರ ಅರಿವಾಗುತ್ತದೆ.
ನಮ್ಮೊಳಗಿನ ಶಬ್ದಗಳು ನಿಂತಾಗ ಕಾಡಿನ ನೀಶಬ್ದದಲ್ಲಿನ ಶಬ್ದ.... ಮೌನದಲ್ಲಿನ ಮಾತು ಅರ್ಥವಾಗುತ್ತದೆ.

 ಜಗತ್ತಿನ ಯಾOತ್ರಿಕತೆಯನು ಬಿಟ್ಟು, ಅಜರಾಮರವಾಗಿರುವ ಕಾಡಿನ ಜೀವ ಜಗತ್ತನು ಸವಿಯಲು, ಅದನ್ನು ಕೆಮೆರಾ ಕಣ್ಣಿಂದ ಕ್ಲಿಕ್ಕಿಸಲು  ವಾರಾಂತ್ಯದ ಫೋಟೋಗ್ರಫಿ ಕಾರ್ಯಗರಕ್ಕೆ ಹೋಗಿದ್ದೆವು.
ಬೆಳ್ಳಗೆ 4 ಗಂಟೆಗೆ ಎದ್ದು ಬೆಂಗಳೂರು – ಮೈಸೂರ್- ಹುಣಸೂರು ಮಾರ್ಗವಾಗಿ ನಾಗರಹೊಳೆ ಅಭಯಾರಣ್ಯದ ಚೆಕ್ ಪೋಸ್ಟ್ ತಲುಪಿದೆವು.
ಚೆಕ್ ಪೋಸ್ಟ್ ನಿಂದ ಕಾಡಿನ ಪ್ರವೇಶ. ನಿರ್ಜನ ನಿಶಬ್ದದದ ನಡುವೆ ನಿದಾನವಾಗಿ ಚಲಿಸುತ್ತಿದಾಗ ಜಿಂಕೆಯೊಂದು ಕಾಣಿಸಿ ಪಟ್ಟನೆ ಮಾಯವಾಯಿತು. ನಮ್ಮ ವೇಗದ ಮಿತಿ 20-30 ಕಿಲೋ.ಮೀಟರ್. ಸ್ವಲ್ಪ ದೂರದಲ್ಲೇ ರಸ್ತೆಯ ಬದಿಯಲ್ಲೇ ಆನೆಯೊಂದು ತನ್ನ ಪಾಡಿಗೆ ಹಸಿರು ಮೇಯುತಿತ್ತು. ದಾರಿಯುದಕ್ಕು ಪಕ್ಷಿಗಳ ಚಿಲಿ ಪಿಲಿ ಶಬ್ದ,
ಲಂಗುರ್ ಕೋತಿಗಳ ಆಟ, ಜಿಂಕೆಗಳ ಓಡಾಟ ನೋಡುತ್ತಾ ಅಭಯಾರಣ್ಯದ ನಡುವೆಯಿರುವ ಅರಣ್ಯಧಿಕಾರಿ ಕಛೇರಿಯ ತಲುಪಿದೆವು. ಕಾರ್ಯಾಗಾರಕ್ಕೆ ಬಂದಿದ್ದ ಇತರ ಸ್ನೇಹಿತರನ್ನು ಕೂಡಿಕೊಂಡೆವು.
ಕೆಲವು ಛಾಯಾಗ್ರಾಹಕರು ಆಗ ತಾನೇ ಕೆನ್ನಾಯಿಗಳು (wild dogs) ಕಾಡು ಹಂದಿಯನ್ನು (wild boar) ಬೇಟೆಯಾಡಿದ ದೃಶ್ಯ ಸೆರೆಯಿಡಿಯುತಿದ್ದರು. ಕೆನ್ನಾಯಿಗಳು ತಮ್ಮ ಬೇಟೆಯನ್ನು ಬಿಟ್ಟು ಮರೆಯಲಿ ನಿಂತು ಜನಸಂದಣಿ ಚದುರಲು ಕಾಯುತ್ತಿತು.
ಕಾರ್ಯಾಗಾರದ ಒಂದು ನೋಟ

  • ಕಾರ್ಯಾಗಾರದ ಸಹಭಾಗಿಗಳ ಪರಿಚಯ ಮಾಡಿಕೊಂಡ ಬಳಿಕ, ನಮ್ಮ ಫೋಟೋಗ್ರಫಿಯಲ್ಲಿನ ಆಸಕ್ತಿ ಮತ್ತು ಕಾರ್ಯಗರದಿಂದ ನಮ್ಮ ಅಪೇಕ್ಷೆಯನ್ನು ತಿಳಿದು ಪ್ರಾರಂಭಿಸಲಾಯಿತು.
  • ಮನುರವರು ಫೋಟೋಗ್ರಫಿ ಮತ್ತು ಕೆಮೆರಾದ ಹಿತಿಹಾಸ ಅದು ನಡೆದು ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ ಕೆಮೆರಾದ ಭಾಗಗಳನ್ನು ವಿವರಿಸಿದರು.
  • ನಮ್ಮ ಕೆಮೆರಾವನ್ನು ನಮಗೆ ಪರಿಚಯಿಸಿದ ಬಗ್ಗೆ.- ನಮ್ಮ ಕೆಮೆರಾದ ಸದ್ಯತೆ ಮತ್ತು ಅದರ ಕಮ್ಮಿಗಳು,ನಮ್ಮ ಕೆಮೆರಾದ ವಿವಿದ ಗುಂಡಿಗಳು ಮತ್ತು ಅದರ ಉಪಯೋಗಗಳು.
  • ಕೆಮೆರಾದ ಅಪರ್ಚರ್, ಶೆಟ್ಟರ್ ಸ್ಪೀಡ್, ಮತ್ತು ಐ‌ಎಸ್‌ಓ ಗಳ ಸಂಭಂದ ಅದರ ನಿಯಂತ್ರಣ. ಮ್ಯಾನುವಲ್ ಮೋಡ್ ನಲ್ಲಿ ಉಪಗಿಸುವುದು.
  • Exposure Triangle ಮತ್ತು composition ಬಗ್ಗೆ ಗೌರೀಶ್ ಮಾತನ್ನಾಡಿ ಅದರ ಮಾಹಿತಿ ಮತ್ತು ಟಿಪ್ಸ್ ಕೊಟ್ಟರು.
  • ಲೋಕೇಶ್ ರವರು ಕೆಮೆರಾವನ್ನು ವಿವಿದ ಅಪರ್ಚರ್ ಮತ್ತು ಶಟ್ಟರ್ ಸ್ಪೀಡ್ ನಲ್ಲಿ ಬಳಸಿ ಬೆಳಕಿನ ಪ್ರಮಾಣ ಮತ್ತು ಅದರ ಪರಿಣಾಮ ಪ್ರಯೋಗಿಕವಾಗಿ ಮಾಡಿಸಿದರು.
  • Portrait, Landscape ಮತ್ತು wildlife ಫೋಟೋಗ್ರಫಿಯ ಮಾಹಿತಿ ಮತ್ತು ತರಬೇತಿ ನೀಡಲಾಯಿತು.

ಹಾಡಿ ಮಕ್ಕಳೊಂದಿಗೆ ಕೆಲವು ಗಂಟೆಗಳು.....
Add caption


ಮುಂಜಾನೆಯ ಮಂಜಿನಲಿ....




ಬೆಳಕಿನೊಂದಿಗೆ ನೆರಳಿನ ಸಮಾಗಮ ......




ವನ್ಯಜೀವಿಗಳೊಡನೆ ನಮ್ಮ ಸಂಪರ್ಕ .... ಕೆಮೆರಾದ ಮೂಲಕ 












ಕಾಡು ವನ್ಯಜೀವಿಗಳು ಅದರ ಪರಿಸರ ಅದರದೇ ಆದ ಸಾಮರಸ್ಯವನ್ನು ಕಾಪಾಡಿಕೊಂಡಿದೆ... ತಾವು ಜೀವಿಸಿ ಬೇರೆಯವರಿಗೂ ಬದುಕಲು ಅಣಿಮಾಡಿಕೊಟ್ಟಿದೆ.
ಮನುಷನ ದಬ್ಬಾಳಿಕೆ ಸ್ವರ್ಥ ಮತ್ತು ಮನ್ನಣೆಯ ದಾಹ ವನದ ವಿನಾಶದತ್ತ ನಾಂದಿಯಡಿದೆ.
ಕಾಡಿಗೆ ನಾನಾರೀತಿಯಾಗಿ ಲಗ್ಗೆಯಿಡುವ ನಾವು ವನ್ಯಮೃಗಗಳ, ಪಕ್ಷಿ ಕೀಟಗಳ, ವನ್ಯಸಂಪತ್ತನ್ನು ಗೌರವಿಸುವುದು ಮತ್ತು ಅದರ ಇರುವಿಕೆಗೆ ದಕ್ಕೆಬಾರದಂತೆ ನೋಡಿಕೊಳ್ಳುವುದು ಸಹ ನಮ್ಮ ಜವಾಬ್ದಾರಿ.

ಈ ಎರಡು ದಿನ ಪೂರ್ತಿಯಾಗಿ ಖುಷಿಪಟ್ಟು ಹೊಸದನ್ನು ಕಲಿತಿದ್ದೇನೆ, ಸಮಯವನ್ನು ಆನಂದಿಸಿದ್ದೇನೆ. ಸಹಭಾಗಿಗಳ ವಡನಾಟ, ಲೋಕೇಶ್, ಗೌರೀಶ್ ಮತ್ತು ಮನು ರವರ ಮಾರ್ಗದರ್ಶನ ಪ್ರೋತ್ಸಾಹ ಮನ ಮೆಚ್ಚಿವಂತದ್ದು.

1 comment:

Srini said...

Beautifully narrated...very very refreshing to read