Sunday, April 28, 2013

ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ ಚಾರಣ

 ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ   ಚಾರಣ
ಕುಂತಿ ಬೆಟ್ಟದ ಶಿಕರದ ತುದಿ


ಸ್ಥಳ: ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯನ್ನು ತಲುಪಿ, ಸುಮಾರು ೧೫ ಕಿಲೋ ಮೀಟರ್ ಚಲಿಸಿದ ನಂತರ ಬಲಕ್ಕೆ ಪಾಂಡುಪುರದ ಮಾರ್ಗ ಫಲಕ ಸಿಕುತ್ತದೆ. ಇದೆ ಮಾರ್ಗವಾಗಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣವನ್ನು ದಾಟಿ ಮುಂದೆ ಸುಮಾರು ೭- ೮ ಕಿಲೋ ಮೀಟರ್ ಸಾಗಿದ ನಂತರ ಬಲಕ್ಕೆ ತಿರುಗಿ ಸ್ವಲ್ಪ ದೂರಕ್ಕೆ ಕುಂತಿ ಬೆಟ್ಟ ಕಾಣಸಿಗುತ್ತದೆ.

ದೇವಸ್ಥಾನದ ಮೆಟ್ಟಿಲುಗಳು 

ಸುಂದರ ಕೆರೆಯ ತೋಪ್ಪಲಿನ ಮತ್ತು ಹಸಿರು ಸಿರಿಯ ನಡುವೆ ಈ ಬೆಟ್ಟವಿದೆ.
ಬೆಟ್ಟದ ಬುಡ ಬಾಗಕ್ಕೆ ತಲುಪುವ ಮುಂಚೆ ಸುಂದರವಾದ ಹರಳಿ ಮರ ಮತ್ತು ಕೆಂಪು ಬಿಳಿ ಬಣ್ಣದ ಮೆಟ್ಟಲುಗಳು ಸ್ವಾಗತವನ್ನು ಕೋರಿ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ಕರೆದೊಯುತ್ತದೆ.

ಏಕ ಶೀಲಾ ಗಣಪ 


ದೊಡ್ಡದಾದ ಏಕಶಿಲೆಯಲ್ಲಿ ಕೆತ್ತಿದ ಗಣೇಶ ನಿಮ್ಮನು ಬರಮಾಡಿಕೊಳುತ್ತಾನೆ. ದೇವಸ್ಥಾನ ಮತ್ತು ಕಲ್ಯಾಣಿಯ ಸುತ್ತ ಕಾಣಸಿಗುವ ಬೆಟ್ಟವೇ ಕುಂತಿ ಬೆಟ್ಟ. ದೇವಸ್ಥಾನದ ಎಡಕ್ಕೆ ಒನಕೆ ಬೆಟ್ಟವಿದೆ ಬಲಕ್ಕೆ ಕುಂತಿ ಬೆಟ್ಟ.
ಮೊದಲು ನಾವು ಕುಂತಿ ಬೆಟ್ಟವನ್ನು ಹತ್ತುವುದೆಂದು ನಿರ್ಣಯಿಸಿ ಅಲ್ಲಿಯ ಸ್ಥಳಿಕನನ್ನು ಜೊತೆಗೂಡಿ ಬೆಟ್ಟ ಹತ್ತಲು ಶುರು ಮಾಡಿದೆವು. ಸ್ವಲ್ಪ ಕಷ್ಟವಾದರು ಸುಮಾರು ಒಂದರಿಂದ ಒಂದೂವರೆ ಗಂಟೆಯಲ್ಲಿ ಕುಂತಿ ಬೆಟ್ಟವನ್ನು ಹತ್ತಬಹುದು.
ಬೆಟ್ಟವನು ಏರುತ್ತ ಎರಡು ಕಡೆಗಳಲ್ಲೂ ವಿವಿಧ ಆಕೃತಿಯ ಶಿಲಾಬಂಡೆಗಳು (ಮೊಸಳೆಯ, ಕರಡಿಯ ಆಕಾರಗಳು) ಮತ್ತು ರಮಣಿಯವಾದ ಪಾಂಡವಪುರದ ಕೆರೆ ಸುತ್ತಲಿನ ಗದ್ದೆ ತೋಟವನ್ನು ಕಾಣಬಹುದು.


ಉಡದ ಆಕಾರದ ಬಂಡೆ

ಪಾಳು ಮಂಟಪ 

ಬೆಟ್ಟದ ತುದಿಯಲ್ಲ್ಲಿ ಗೋಪುರದ ಆಕಾರದ ಮಂಟಪವಿದೆ ಅದರಲ್ಲಿ ಶಿಲೆಯಲ್ಲಿ ಕೆತ್ತಿದ ಪಾದಗಳಿವೆ. ಅದನ್ನು " ಭೀಮನ ಪಾದಗಳು ಅಥವಾ ಭೀಮನ ಹೆಜ್ಜೆಗಳು ಎನ್ನುತ್ತಾರೆ."

ಭೀಮನ ಪಾದಗಳು
ಮಂಟಪದ ಹತ್ಹಿರವೇ ಸಣ್ಣದಾದ ಬಂಡೆಗಳ ಸಂದುವಿನಲ್ಲಿ ನೀರಿನ ಶೇಕರಣೆ ಇದೆ. ಇಲ್ಲಿ ವರ್ಷದ ೩೬೫ ದಿನವು ನಿರಿರುತ್ತದೆಯಂತೆ. ಇದನ್ನು" ಕುಂತಿಯ ಕೊಳ " ಎನುತ್ತಾರೆ.
ಕುಂತಿ ಕೊಳದ ಸ್ವಲ್ಪ ಮುಂದೆ ಬಂಡೆಯ ಒಂದು ಉದ್ದಕೆ ಬಂಡೆಯ ಬಣ್ಣ ಕಪ್ಪು ಮತ್ತು ಬಿಳಿಯಾಗಿ ಕಾಣಸಿಗುತ್ತದೆ ಅದನ್ನು ಕುಂತಿ ಸೀರೆ ಒಣಗಿಸಿದ ಗುರುತು ಅಥವಾ " ಕುಂತಿ ಸೀರೆ" ಎನ್ನುತಾರೆ.

ಕುಂತಿ ಸೀರೆ ಒಣಗಿಸಿದ ಜಾಗ

ಮಂಟಪದ ಹಿಂದೆ ಬಂಡೆಯಲ್ಲಿ ಕೊರಕಲಿದೆ ಅದು ಒಳ್ಳೆಯ ಆಕಾರದಲಿದೆ ಅದನ್ನು " ಭೀಮನ ಒಳ್ಳೆ" ಯಂದು ಕರೆಯುತ್ತಾರೆ.
ಈ ಪೌರಾಣಿಕ ಕಥೆಗಳು ಏನೇ ಇರ್ಲಿ ಕುಂತಿ ಬೆಟ್ಟ ಅದರದೇ ಸೌಂದರ್ಯವನ್ನು ಮಡಿಲಿನಲ್ಲಿ ತುಂಬಿಕೊಂಡಿದೆ.

ಭೀಮನ ಒಳ್ಳೆ

ಒನಕೆ ಬೆಟ್ಟ
ಕುಂತಿ ಬೆಟ್ಟದ ಮೊಗ್ಗಲಿನಲ್ಲೇ ಒನಕೆ ಬೆಟ್ಟವಿದೆ, ತುಸು ಕಷ್ಟವಾದರೂ ನೋಡಬೇಕಾದ ಜಾಗ. ಬೆಟ್ಟದ ತುದಿಯಲ್ಲಿ ಒನಕೆ ಆಕಾರದ ಕಂಬವಿದೆ- ಅದಕ್ಕೆ ಒನಕೆ ಬೆಟ್ಟವೆಂಬ ಹೆಸರು.
ಪಾಳುಬಿದ್ದ ಗುಹೆಗಳು, ಸ್ವಲ್ಪ ಕಟಿಣವಾದ ಏರು ತಗ್ಗುಗಳು ಚಾರಣಿಕರನ್ನು ಹುರಿದುಮ್ಬಿಸುತದೆ.
ಒನಕೆ ಬೆಟ್ಟದ ತುದಿ 

Add caption



ಒನಕೆ ಬೆಟ್ಟದ ಶಿಕರದ  ತುದಿ ಮತ್ತು ಒನಕೆ ಆಕಾರದ ಕಲ್ಲುಕಂಬ.
ಕುಂತಿ ಬೆಟ್ಟದ ಚಾರಣ ತುಂಬಾ ಸುಲಬದ ಮತ್ತು ಮುದ ನೀಡುವ ಚಾರಣ.