Friday, March 4, 2011

ಆಚಾರ V/S ವಿಚಾರ

ಥಾಬಿಸುರ್ಲಾದ ಶಿವಾಲಯ (ಗೋವಾ ರಾಜ್ಯಕೆ ಸೇರಿದ್ದು )

 

ಶಿವರಾತ್ರಿಯ ಆಚರಣೆಗೆ ಅನೇಕ ಕಥೆಗಳಿವೆ ....
ಕಥೆ 1: ಸಮುದ್ರ ಮಥನದ ಸಮಯದಲಿ ಉಕ್ಕಿ ಬಂದ ವಿಷವನ್ನು ಕುಡಿದ ಶಿವ ಆ ರಾತ್ರಿ ಮಲಗಬಾರದೆಂದು ದೇವತೆಗಳು ರಾತ್ರಿಯಿಡಿ  ನಿದ್ರಾಹಾರ ಬಿಟ್ಟು  ಶಿವನನ್ನು ಆರಾದಿಸಿದರಂತೆ ... ಆ ರಾತ್ರಿಯೇ ಶಿವರಾತ್ರಿ 

ಕಥೆ 2: ವ್ಯಗ್ರವೆಂದು  ಬೇಡನನ್ನು ಅಟ್ಟಿಸಿಕೊಂಡು ಬರುತ್ತದೆ, ಬಿಲ್ವ ಮರವನ್ನೆರಿದ ಬೇಡ ರಾತ್ರಿಯಿಡಿ ತುಕಡಿಸಬಾರದೆಂದು ಬಿಲ್ವ ಎಲೆಗಳನ್ನು ಕೆಳಗಿದ್ದ ಶಿವ ಲಿಂಗದ ಮೇಲೆ ಹಾಕಿ ಶಿವಾನುಗ್ರಹ ಪಡೆಯುತ್ತಾನೆ. ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಡಿದ ರಾತ್ರಿಯೇ  ಶಿವರಾತ್ರಿ ಎಂದು ......

ಕಥೆ 3: ಶಿವರಾತ್ರಿ ಫಾಲ್ಗುಣ ಮಾಸದ ಅಮವಾಸೆಯ ಹಿಂದಿನ ದಿನ ಆಚರಿಸಲಾಗುತ್ತದೆ. ಕಲಿಯುಗದ ಪ್ರಾರಂಬದ  ಹಿಂದಿನ ದಿನ ದೇವಾನು ದೇವತೆಗಳು ಕಲಿಯನ್ನು ತಾಳಲು ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಾಡಿದಿದರು.
ಇಲ್ಲಿ ಅಮವಾಸೆ (ಕತ್ತಲೆಯ ಮತ್ತು  ಕಲಿಯ ಸಂಕೇತ ) ಕಲಿಯುಗದಲಿ ಬಾಳಲು ಶಿವಾನುಗ್ರಹ ಬೇಡಿದರಿಂದ ಆ ರಾತ್ರಿಯೇ ಶಿವರಾತ್ರಿ ಎಂದು .......
ಮೂರೂ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ವಿಷಯವೆಂದರೆ  ನಿದ್ರಾಹಾರವನ್ನು ಬಿಟ್ಟಿರುವುದು. ಅಂದರೆ ಉಪವಾಸ ಮತ್ತು ಜಾಗರಣೆ. ಅದನ್ನೇ ತಾನೇ ಎಲ್ಲರು ಮಾಡುತ್ತಿರುವುದು.
ಆಚರಣೆ ಒಂದುದಾದರೆ ಸಾಕೆ  ಅದರ ಸತ್ವ ವಿಚಾರಣೆ ಬೇಡವೇ?

ಶಿವರಾತ್ರಿಯ ತತ್ವ (ಸತ್ವದ) ವಿಚಾರವೇನು?

"ಏಕಚಿತ್ತತೆ" (ಒಂದೇ ಮನಸ್ಸಿನಿಂದ) ಅಥವಾ ಮೈಮರೆತು ಮಾಡುವ ಕೆಲಸ (Losing self). ಅದು ಶಿವರಾತ್ರಿಗೆ ಮೀಸಲಲ್ಲ ಯಾರು ಯಾವಾಗ ಬೇಕಾದರೂ ಅನುಭವಿಸಬಹುದು. ಉ.ದಾ:..
  • ಮೈಮರೆತು ಪುಸ್ತಕ ಓದುವಾಗಿನ ಅನುಭವ... 
  • ಮೈಮರೆತು ಆಟದಲ್ಲಿ ತಲ್ಲಿನವಾದಾಗ ...  ಅಮ್ಮನ ಊಟದ ಕರೆಗೆ ಏನಾಯಿತು 
  • ಚಿತ್ರ ಬಿಡಿಸುವ ಚಿತ್ರಕಾರನ ಏಕಚಿತ್ತತ..... ಅವನಿಗೆ ನಿದ್ರೆ ಅಡ್ಡಬರುವುದೇ
  •  ನಮಗೆ ಕುಶಿ ಕೊಡುವ ಕೆಲಸ  ಮಾಡುವಾಗ ಯಾವುದರ ಪರಿವೆ ನಮಗೆ...
ಮೈಮರೆತು ಮಾಡುವ ಕೆಲಸಕ್ಕೆ ಊಟ ನಿದ್ರೆಯ ಅಡಚಣೆ ಬಂದಿದೆಯೇ ಬಂದರು ನಾವು ಹೇಗೆಲ್ಲಾ ನಿಬಾಹಿಸಿ ಮಾಡಿದ ಕಳಸದ ಕುಶಿ ಸಂತೋಷವನ್ನು ಅನುಭವಿಸಿಲ್ಲ.... ಯೋಚಿಸಿ ನೋಡಿ.
ಆಚರಣೆಗಳು  ಕೇವಲ Rituals ಮಾತ್ರವಲ್ಲ ಅದರ  ಹಿಂದೆ ಅನೇಕ ವಿಚಾರಗಳಿರುತ್ತವೆ ಅದನ್ನು ಅರಿಯುವುದು ಮತ್ತು ಅನುಭವಿಸುವುದು ಅದರ ಉದ್ದೇಶ ಈ ನಿಟ್ಟಿನಲ್ಲಿ ನಿಮ್ಮ ಯಚನೆಗಳನ್ನು ಹರಿದು ಬಿಡಿ.
ಇಲ್ಲವಾದರೆ       
                        " ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು 
                          ಎತ್ತು ಗಾಣವ ಹೊತ್ತಿ ಸುತ್ತಿ ಬಂದಂತೆ " - ಸರ್ವಜ್ಞ -