Tuesday, February 22, 2011

ವಿಕಸನ



ಬೀಜದ ಸಾವು - ಮೊಳಕೆಯ ಅಂಕುರ
ಮೊಳಕೆಯ ಸಾವು -ಗಿಡದ ಅಂಕುರ
ಹೂವಿನ ಸಾವು - ಕಾಯಿಯ ಅಂಕುರ
ಒಂದರ ಅಂತ್ಯ ಮತ್ತೊಂದ ಅಂಕುರ
ಪರಿವರ್ತನೆಯೇ ಸತ್ಯ - ವಿಕಸನವೇ ನಿತ್ಯ
-ದೇವು-

Monday, February 21, 2011

ಕ್ರಿಯಾಶೀಲತೆ ಪ್ರಕೃತಿಯ ನಿಯಮ....


















ಕ್ರಿಯಾಶೀಲತೆ ಪ್ರಕೃತಿಯ ನಿಯಮ


ಮನೆಯ ಮುಂದೆ ಕಟ್ಟಡದ ಕೆಲಸ ನಡೆಯುತ್ತಿದೆ, ಅಲ್ಲಿ ಕೂಲಿಗಾಗಿ ದುಡಿಯಲು ಒಂದು ಸಂಸಾರ ಬಂದಿದೆ . ೫-೬ ಮಂದಿ ಮಕ್ಕಳು. ಕುಲಿಯವರ ಸ್ಥಿತಿ ಗೊತಲ್ಲ ಅದೇ ಬೀದಿ ಬದಿಯ ಸ್ತಾನ, ಸೌದೆ ಹುರಿಯ ಅಡುಗೆ. ಅದರಲಿ ಯಾವ ಮಕ್ಕಳು ಶಾಲೆಗೆ ಹೋದಂತೆ ಕಾಣಲ್ಲಿಲ, ಹೋಗಿದ್ದರು - ವರುಷ ಹೋಗಿರಬಹುದು. ಅವರನ್ನು ದಿನೇ ನೊಡುತ್ತಿದ ನಮಗೆ ವಯಸ್ಸಿನಲೇ ದುಡಿಯಲು ನಿಂತ ಅವರ ಬಾಲ್ಯ ಕಳದು ಹೋಗುತ್ತಿದೆಯಲ ಎಂದೆನಿಸುತ್ತಿತು.

ಒಂದು
ದಿನ ಮಕ್ಕಳ ಅಜ್ಜಿಯನ್ನು ವಿಚಾರಿಸಿದೆವು " ಯಾಕಮ್ಮ ಮಕ್ಕಳನ್ನು ಶಾಲೆಗೆ ಕಲಸೋದಲ್ವ? " ಅದಕ್ಕೆ ಅಜ್ಜಿ ಹೇಳಿದಳು.. ಏನ್ ಮಾಡೋದ್ ಹೇಳಿ... ಉರುನಾಗೆ ೧೦ ಎಕ್ಕರೆ ಜಮೀನ್ ಐತಿ, ಮಳೆಯಿಲ್ಲ ನೀರಿಲ್ಲ, ತಿನ್ನಕ ಒಂದು ಕಾಳು ಸಿಕ್ಕಲ್ಲ ನಮ್ಮದು ದೊಡ್ಡ ಸಂಸಾರ ನಡಿಬೇಕಲ್ಲ ಅದಕೆ ಬೆಂಗಳೂರಿಗೆ ಬಂಧ್ವಿ. ಅಲ್ಲಿಗೆ ಮಕ್ಕಳ ಶಾಲೆ ಕತೆ ಮುಗಿತು ಬಿಡೀ..... ಕೆಲಸ ಕಲೆತು ಕೊಂಡರೆ ಬದುಕೋತವೆ. ಪುಸ್ತಕ ಪೆನ್ಸಿಲು ಬಿಡೀ ಬಾಲ್ಯದ ಆಟಗಳು, ಅರಿಯದ ಮಕ್ಕಳಲ್ಲಿ ಒಂದು ದಿನವಾದರೂ ಅವರ ಜೀವನದಲ್ಲಿ ಬಣ್ಣ ತುಂಬುವ ಆಸೆ ನನ್ನಾಕೆಗೆ..... ಅವಳ ಪ್ರಯತ್ನವೇ ಇದು...




Sunday, February 20, 2011

ದಿಕ್ಕು ದೆಸೆ




ಅಗಣಿತ ತಾರಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು

ನನ್ನೀ ಜೇವನ ಸಮುದ್ರಯಾನಕೆ ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಲೆಡೆ ನಾ ತೊಳಲುತ ಬಳಲಿದರೇನು

ದಿಟ್ಟಿಯು ನಿನ್ನೊಳೆ ನೆಟ್ಟಿರೆ ಕಡೆಗೆ ಗುರಿಯನು ಸೇರೆನೆ ನಾನು.

ಚಂಚಳವಾಗಿಹ ತಾರಿಕೆಗಳಲಿ ನಿಶ್ಚಲನಂದರೆ ನೀನೆ

ಮಿಂಚಿ ಮುಳುಗುತಿಹ ನಶ್ವರದೆದೆಯಲಿ ಶಶ್ವತನೆಂದರೆ ನೀನೆ.

-ಕು.ವೆಂ.ಪು.