Sunday, April 28, 2013

ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ ಚಾರಣ

 ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ   ಚಾರಣ
ಕುಂತಿ ಬೆಟ್ಟದ ಶಿಕರದ ತುದಿ


ಸ್ಥಳ: ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯನ್ನು ತಲುಪಿ, ಸುಮಾರು ೧೫ ಕಿಲೋ ಮೀಟರ್ ಚಲಿಸಿದ ನಂತರ ಬಲಕ್ಕೆ ಪಾಂಡುಪುರದ ಮಾರ್ಗ ಫಲಕ ಸಿಕುತ್ತದೆ. ಇದೆ ಮಾರ್ಗವಾಗಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣವನ್ನು ದಾಟಿ ಮುಂದೆ ಸುಮಾರು ೭- ೮ ಕಿಲೋ ಮೀಟರ್ ಸಾಗಿದ ನಂತರ ಬಲಕ್ಕೆ ತಿರುಗಿ ಸ್ವಲ್ಪ ದೂರಕ್ಕೆ ಕುಂತಿ ಬೆಟ್ಟ ಕಾಣಸಿಗುತ್ತದೆ.

ದೇವಸ್ಥಾನದ ಮೆಟ್ಟಿಲುಗಳು 

ಸುಂದರ ಕೆರೆಯ ತೋಪ್ಪಲಿನ ಮತ್ತು ಹಸಿರು ಸಿರಿಯ ನಡುವೆ ಈ ಬೆಟ್ಟವಿದೆ.
ಬೆಟ್ಟದ ಬುಡ ಬಾಗಕ್ಕೆ ತಲುಪುವ ಮುಂಚೆ ಸುಂದರವಾದ ಹರಳಿ ಮರ ಮತ್ತು ಕೆಂಪು ಬಿಳಿ ಬಣ್ಣದ ಮೆಟ್ಟಲುಗಳು ಸ್ವಾಗತವನ್ನು ಕೋರಿ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ಕರೆದೊಯುತ್ತದೆ.

ಏಕ ಶೀಲಾ ಗಣಪ 


ದೊಡ್ಡದಾದ ಏಕಶಿಲೆಯಲ್ಲಿ ಕೆತ್ತಿದ ಗಣೇಶ ನಿಮ್ಮನು ಬರಮಾಡಿಕೊಳುತ್ತಾನೆ. ದೇವಸ್ಥಾನ ಮತ್ತು ಕಲ್ಯಾಣಿಯ ಸುತ್ತ ಕಾಣಸಿಗುವ ಬೆಟ್ಟವೇ ಕುಂತಿ ಬೆಟ್ಟ. ದೇವಸ್ಥಾನದ ಎಡಕ್ಕೆ ಒನಕೆ ಬೆಟ್ಟವಿದೆ ಬಲಕ್ಕೆ ಕುಂತಿ ಬೆಟ್ಟ.
ಮೊದಲು ನಾವು ಕುಂತಿ ಬೆಟ್ಟವನ್ನು ಹತ್ತುವುದೆಂದು ನಿರ್ಣಯಿಸಿ ಅಲ್ಲಿಯ ಸ್ಥಳಿಕನನ್ನು ಜೊತೆಗೂಡಿ ಬೆಟ್ಟ ಹತ್ತಲು ಶುರು ಮಾಡಿದೆವು. ಸ್ವಲ್ಪ ಕಷ್ಟವಾದರು ಸುಮಾರು ಒಂದರಿಂದ ಒಂದೂವರೆ ಗಂಟೆಯಲ್ಲಿ ಕುಂತಿ ಬೆಟ್ಟವನ್ನು ಹತ್ತಬಹುದು.
ಬೆಟ್ಟವನು ಏರುತ್ತ ಎರಡು ಕಡೆಗಳಲ್ಲೂ ವಿವಿಧ ಆಕೃತಿಯ ಶಿಲಾಬಂಡೆಗಳು (ಮೊಸಳೆಯ, ಕರಡಿಯ ಆಕಾರಗಳು) ಮತ್ತು ರಮಣಿಯವಾದ ಪಾಂಡವಪುರದ ಕೆರೆ ಸುತ್ತಲಿನ ಗದ್ದೆ ತೋಟವನ್ನು ಕಾಣಬಹುದು.


ಉಡದ ಆಕಾರದ ಬಂಡೆ

ಪಾಳು ಮಂಟಪ 

ಬೆಟ್ಟದ ತುದಿಯಲ್ಲ್ಲಿ ಗೋಪುರದ ಆಕಾರದ ಮಂಟಪವಿದೆ ಅದರಲ್ಲಿ ಶಿಲೆಯಲ್ಲಿ ಕೆತ್ತಿದ ಪಾದಗಳಿವೆ. ಅದನ್ನು " ಭೀಮನ ಪಾದಗಳು ಅಥವಾ ಭೀಮನ ಹೆಜ್ಜೆಗಳು ಎನ್ನುತ್ತಾರೆ."

ಭೀಮನ ಪಾದಗಳು
ಮಂಟಪದ ಹತ್ಹಿರವೇ ಸಣ್ಣದಾದ ಬಂಡೆಗಳ ಸಂದುವಿನಲ್ಲಿ ನೀರಿನ ಶೇಕರಣೆ ಇದೆ. ಇಲ್ಲಿ ವರ್ಷದ ೩೬೫ ದಿನವು ನಿರಿರುತ್ತದೆಯಂತೆ. ಇದನ್ನು" ಕುಂತಿಯ ಕೊಳ " ಎನುತ್ತಾರೆ.
ಕುಂತಿ ಕೊಳದ ಸ್ವಲ್ಪ ಮುಂದೆ ಬಂಡೆಯ ಒಂದು ಉದ್ದಕೆ ಬಂಡೆಯ ಬಣ್ಣ ಕಪ್ಪು ಮತ್ತು ಬಿಳಿಯಾಗಿ ಕಾಣಸಿಗುತ್ತದೆ ಅದನ್ನು ಕುಂತಿ ಸೀರೆ ಒಣಗಿಸಿದ ಗುರುತು ಅಥವಾ " ಕುಂತಿ ಸೀರೆ" ಎನ್ನುತಾರೆ.

ಕುಂತಿ ಸೀರೆ ಒಣಗಿಸಿದ ಜಾಗ

ಮಂಟಪದ ಹಿಂದೆ ಬಂಡೆಯಲ್ಲಿ ಕೊರಕಲಿದೆ ಅದು ಒಳ್ಳೆಯ ಆಕಾರದಲಿದೆ ಅದನ್ನು " ಭೀಮನ ಒಳ್ಳೆ" ಯಂದು ಕರೆಯುತ್ತಾರೆ.
ಈ ಪೌರಾಣಿಕ ಕಥೆಗಳು ಏನೇ ಇರ್ಲಿ ಕುಂತಿ ಬೆಟ್ಟ ಅದರದೇ ಸೌಂದರ್ಯವನ್ನು ಮಡಿಲಿನಲ್ಲಿ ತುಂಬಿಕೊಂಡಿದೆ.

ಭೀಮನ ಒಳ್ಳೆ

ಒನಕೆ ಬೆಟ್ಟ
ಕುಂತಿ ಬೆಟ್ಟದ ಮೊಗ್ಗಲಿನಲ್ಲೇ ಒನಕೆ ಬೆಟ್ಟವಿದೆ, ತುಸು ಕಷ್ಟವಾದರೂ ನೋಡಬೇಕಾದ ಜಾಗ. ಬೆಟ್ಟದ ತುದಿಯಲ್ಲಿ ಒನಕೆ ಆಕಾರದ ಕಂಬವಿದೆ- ಅದಕ್ಕೆ ಒನಕೆ ಬೆಟ್ಟವೆಂಬ ಹೆಸರು.
ಪಾಳುಬಿದ್ದ ಗುಹೆಗಳು, ಸ್ವಲ್ಪ ಕಟಿಣವಾದ ಏರು ತಗ್ಗುಗಳು ಚಾರಣಿಕರನ್ನು ಹುರಿದುಮ್ಬಿಸುತದೆ.
ಒನಕೆ ಬೆಟ್ಟದ ತುದಿ 

Add caption



ಒನಕೆ ಬೆಟ್ಟದ ಶಿಕರದ  ತುದಿ ಮತ್ತು ಒನಕೆ ಆಕಾರದ ಕಲ್ಲುಕಂಬ.
ಕುಂತಿ ಬೆಟ್ಟದ ಚಾರಣ ತುಂಬಾ ಸುಲಬದ ಮತ್ತು ಮುದ ನೀಡುವ ಚಾರಣ.




Friday, March 4, 2011

ಆಚಾರ V/S ವಿಚಾರ

ಥಾಬಿಸುರ್ಲಾದ ಶಿವಾಲಯ (ಗೋವಾ ರಾಜ್ಯಕೆ ಸೇರಿದ್ದು )

 

ಶಿವರಾತ್ರಿಯ ಆಚರಣೆಗೆ ಅನೇಕ ಕಥೆಗಳಿವೆ ....
ಕಥೆ 1: ಸಮುದ್ರ ಮಥನದ ಸಮಯದಲಿ ಉಕ್ಕಿ ಬಂದ ವಿಷವನ್ನು ಕುಡಿದ ಶಿವ ಆ ರಾತ್ರಿ ಮಲಗಬಾರದೆಂದು ದೇವತೆಗಳು ರಾತ್ರಿಯಿಡಿ  ನಿದ್ರಾಹಾರ ಬಿಟ್ಟು  ಶಿವನನ್ನು ಆರಾದಿಸಿದರಂತೆ ... ಆ ರಾತ್ರಿಯೇ ಶಿವರಾತ್ರಿ 

ಕಥೆ 2: ವ್ಯಗ್ರವೆಂದು  ಬೇಡನನ್ನು ಅಟ್ಟಿಸಿಕೊಂಡು ಬರುತ್ತದೆ, ಬಿಲ್ವ ಮರವನ್ನೆರಿದ ಬೇಡ ರಾತ್ರಿಯಿಡಿ ತುಕಡಿಸಬಾರದೆಂದು ಬಿಲ್ವ ಎಲೆಗಳನ್ನು ಕೆಳಗಿದ್ದ ಶಿವ ಲಿಂಗದ ಮೇಲೆ ಹಾಕಿ ಶಿವಾನುಗ್ರಹ ಪಡೆಯುತ್ತಾನೆ. ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಡಿದ ರಾತ್ರಿಯೇ  ಶಿವರಾತ್ರಿ ಎಂದು ......

ಕಥೆ 3: ಶಿವರಾತ್ರಿ ಫಾಲ್ಗುಣ ಮಾಸದ ಅಮವಾಸೆಯ ಹಿಂದಿನ ದಿನ ಆಚರಿಸಲಾಗುತ್ತದೆ. ಕಲಿಯುಗದ ಪ್ರಾರಂಬದ  ಹಿಂದಿನ ದಿನ ದೇವಾನು ದೇವತೆಗಳು ಕಲಿಯನ್ನು ತಾಳಲು ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಾಡಿದಿದರು.
ಇಲ್ಲಿ ಅಮವಾಸೆ (ಕತ್ತಲೆಯ ಮತ್ತು  ಕಲಿಯ ಸಂಕೇತ ) ಕಲಿಯುಗದಲಿ ಬಾಳಲು ಶಿವಾನುಗ್ರಹ ಬೇಡಿದರಿಂದ ಆ ರಾತ್ರಿಯೇ ಶಿವರಾತ್ರಿ ಎಂದು .......
ಮೂರೂ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ವಿಷಯವೆಂದರೆ  ನಿದ್ರಾಹಾರವನ್ನು ಬಿಟ್ಟಿರುವುದು. ಅಂದರೆ ಉಪವಾಸ ಮತ್ತು ಜಾಗರಣೆ. ಅದನ್ನೇ ತಾನೇ ಎಲ್ಲರು ಮಾಡುತ್ತಿರುವುದು.
ಆಚರಣೆ ಒಂದುದಾದರೆ ಸಾಕೆ  ಅದರ ಸತ್ವ ವಿಚಾರಣೆ ಬೇಡವೇ?

ಶಿವರಾತ್ರಿಯ ತತ್ವ (ಸತ್ವದ) ವಿಚಾರವೇನು?

"ಏಕಚಿತ್ತತೆ" (ಒಂದೇ ಮನಸ್ಸಿನಿಂದ) ಅಥವಾ ಮೈಮರೆತು ಮಾಡುವ ಕೆಲಸ (Losing self). ಅದು ಶಿವರಾತ್ರಿಗೆ ಮೀಸಲಲ್ಲ ಯಾರು ಯಾವಾಗ ಬೇಕಾದರೂ ಅನುಭವಿಸಬಹುದು. ಉ.ದಾ:..
  • ಮೈಮರೆತು ಪುಸ್ತಕ ಓದುವಾಗಿನ ಅನುಭವ... 
  • ಮೈಮರೆತು ಆಟದಲ್ಲಿ ತಲ್ಲಿನವಾದಾಗ ...  ಅಮ್ಮನ ಊಟದ ಕರೆಗೆ ಏನಾಯಿತು 
  • ಚಿತ್ರ ಬಿಡಿಸುವ ಚಿತ್ರಕಾರನ ಏಕಚಿತ್ತತ..... ಅವನಿಗೆ ನಿದ್ರೆ ಅಡ್ಡಬರುವುದೇ
  •  ನಮಗೆ ಕುಶಿ ಕೊಡುವ ಕೆಲಸ  ಮಾಡುವಾಗ ಯಾವುದರ ಪರಿವೆ ನಮಗೆ...
ಮೈಮರೆತು ಮಾಡುವ ಕೆಲಸಕ್ಕೆ ಊಟ ನಿದ್ರೆಯ ಅಡಚಣೆ ಬಂದಿದೆಯೇ ಬಂದರು ನಾವು ಹೇಗೆಲ್ಲಾ ನಿಬಾಹಿಸಿ ಮಾಡಿದ ಕಳಸದ ಕುಶಿ ಸಂತೋಷವನ್ನು ಅನುಭವಿಸಿಲ್ಲ.... ಯೋಚಿಸಿ ನೋಡಿ.
ಆಚರಣೆಗಳು  ಕೇವಲ Rituals ಮಾತ್ರವಲ್ಲ ಅದರ  ಹಿಂದೆ ಅನೇಕ ವಿಚಾರಗಳಿರುತ್ತವೆ ಅದನ್ನು ಅರಿಯುವುದು ಮತ್ತು ಅನುಭವಿಸುವುದು ಅದರ ಉದ್ದೇಶ ಈ ನಿಟ್ಟಿನಲ್ಲಿ ನಿಮ್ಮ ಯಚನೆಗಳನ್ನು ಹರಿದು ಬಿಡಿ.
ಇಲ್ಲವಾದರೆ       
                        " ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು 
                          ಎತ್ತು ಗಾಣವ ಹೊತ್ತಿ ಸುತ್ತಿ ಬಂದಂತೆ " - ಸರ್ವಜ್ಞ -


Tuesday, February 22, 2011

ವಿಕಸನ



ಬೀಜದ ಸಾವು - ಮೊಳಕೆಯ ಅಂಕುರ
ಮೊಳಕೆಯ ಸಾವು -ಗಿಡದ ಅಂಕುರ
ಹೂವಿನ ಸಾವು - ಕಾಯಿಯ ಅಂಕುರ
ಒಂದರ ಅಂತ್ಯ ಮತ್ತೊಂದರ ಅಂಕುರ
ಪರಿವರ್ತನೆಯೇ ಸತ್ಯ - ವಿಕಸನವೇ ನಿತ್ಯ
-ದೇವು-

Monday, February 21, 2011

ಕ್ರಿಯಾಶೀಲತೆ ಪ್ರಕೃತಿಯ ನಿಯಮ....


















ಕ್ರಿಯಾಶೀಲತೆ ಪ್ರಕೃತಿಯ ನಿಯಮ


ಮನೆಯ ಮುಂದೆ ಕಟ್ಟಡದ ಕೆಲಸ ನಡೆಯುತ್ತಿದೆ, ಅಲ್ಲಿ ಕೂಲಿಗಾಗಿ ದುಡಿಯಲು ಒಂದು ಸಂಸಾರ ಬಂದಿದೆ . ೫-೬ ಮಂದಿ ಮಕ್ಕಳು. ಕುಲಿಯವರ ಸ್ಥಿತಿ ಗೊತಲ್ಲ ಅದೇ ಬೀದಿ ಬದಿಯ ಸ್ತಾನ, ಸೌದೆ ಹುರಿಯ ಅಡುಗೆ. ಅದರಲಿ ಯಾವ ಮಕ್ಕಳು ಶಾಲೆಗೆ ಹೋದಂತೆ ಕಾಣಲ್ಲಿಲ, ಹೋಗಿದ್ದರು ೧-೨ ವರುಷ ಹೋಗಿರಬಹುದು. ಅವರನ್ನು ದಿನೇ ನೊಡುತ್ತಿದ ನಮಗೆ ಈ ವಯಸ್ಸಿನಲೇ ದುಡಿಯಲು ನಿಂತ ಅವರ ಬಾಲ್ಯ ಕಳದು ಹೋಗುತ್ತಿದೆಯಲ ಎಂದೆನಿಸುತ್ತಿತು.

ಒಂದು
ದಿನ ಆ ಮಕ್ಕಳ ಅಜ್ಜಿಯನ್ನು ವಿಚಾರಿಸಿದೆವು " ಯಾಕಮ್ಮ ಮಕ್ಕಳನ್ನು ಶಾಲೆಗೆ ಕಲಸೋದಲ್ವ? " ಅದಕ್ಕೆ ಆ ಅಜ್ಜಿ ಹೇಳಿದಳು.. ಏನ್ ಮಾಡೋದ್ ಹೇಳಿ... ಉರುನಾಗೆ ೧೦ ಎಕ್ಕರೆ ಜಮೀನ್ ಐತಿ, ಮಳೆಯಿಲ್ಲ ನೀರಿಲ್ಲ, ತಿನ್ನಕ ಒಂದು ಕಾಳು ಸಿಕ್ಕಲ್ಲ ನಮ್ಮದು ದೊಡ್ಡ ಸಂಸಾರ ನಡಿಬೇಕಲ್ಲ ಅದಕೆ ಬೆಂಗಳೂರಿಗೆ ಬಂಧ್ವಿ. ಅಲ್ಲಿಗೆ ಮಕ್ಕಳ ಶಾಲೆ ಕತೆ ಮುಗಿತು ಬಿಡೀ..... ಕೆಲಸ ಕಲೆತು ಕೊಂಡರೆ ಬದುಕೋತವೆ. ಪುಸ್ತಕ ಪೆನ್ಸಿಲು ಬಿಡೀ ಬಾಲ್ಯದ ಆಟಗಳು, ಅರಿಯದ ಮಕ್ಕಳಲ್ಲಿ ಒಂದು ದಿನವಾದರೂ ಅವರ ಜೀವನದಲ್ಲಿ ಬಣ್ಣ ತುಂಬುವ ಆಸೆ ನನ್ನಾಕೆಗೆ..... ಅವಳ ಪ್ರಯತ್ನವೇ ಇದು...




Sunday, February 20, 2011

ದಿಕ್ಕು ದೆಸೆ




ಅಗಣಿತ ತಾರಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು

ನನ್ನೀ ಜೇವನ ಸಮುದ್ರಯಾನಕೆ ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಲೆಡೆ ನಾ ತೊಳಲುತ ಬಳಲಿದರೇನು

ದಿಟ್ಟಿಯು ನಿನ್ನೊಳೆ ನೆಟ್ಟಿರೆ ಕಡೆಗೆ ಗುರಿಯನು ಸೇರೆನೆ ನಾನು.

ಚಂಚಳವಾಗಿಹ ತಾರಿಕೆಗಳಲಿ ನಿಶ್ಚಲನಂದರೆ ನೀನೆ

ಮಿಂಚಿ ಮುಳುಗುತಿಹ ನಶ್ವರದೆದೆಯಲಿ ಶಶ್ವತನೆಂದರೆ ನೀನೆ.

-ಕು.ವೆಂ.ಪು.